‘ಟಾಕ್ಸಿಕ್’ ಚಿತ್ರಕ್ಕಾಗಿ ಲಂಡನ್‌ಗೆ ಹಾರಿದ ಯಶ್; ನಡೆಯುತ್ತಿದೆ ದೊಡ್ಡ ಕೊಲಾಬರೇಷನ್
Toxic Movie: ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರದ ಮುಂಬೈ ಶೂಟಿಂಗ್ ಮುಗಿದ ನಂತರ, ಅವರು ಲಂಡನ್‌ಗೆ ತೆರಳಿದ್ದಾರೆ. ಹಾಲಿವುಡ್ ಆ್ಯಕ್ಷನ್ ನಿರ್ದೇಶಕರ ಸಹಯೋಗದೊಂದಿಗೆ ಚಿತ್ರೀಕರಣ ನಡೆದಿದೆ. ಲಂಡನ್‌ನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರ ವಿತರಣಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲು ಯಶ್ ತೆರಳಿದ್ದಾರೆ ಎನ್ನಲಾಗಿದೆ.
ಹಾಲಿವುಡ್ ಆ್ಯಕ್ಷನ್ ನಿರ್ದೇಶಕ ಜೆಜೆ ಪೆರ್ರಿ ಅವರು ಆಗಸ್ಟ್ನಲ್ಲಿ ಭಾರತಕ್ಕೆ ಬಂದಿದ್ದರು. ಅವರು ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’, ‘ಜಾನ್ ವಕ್’ ‘ಡೇ ಶಿಫ್ಟ್’ ರೀತಿಯ ಸಿನಿಮಾಗಳಿಗೆ ಫೈಟ್ ಹೇಳಿಕೊಟ್ಟಿದ್ದಾರೆ. ಅವರು ಕನ್ನಡ ಚಿತ್ರಕ್ಕಾಗಿ ಆಗಮಿಸಿದ್ದರು. ಮುಂಬೈನಲ್ಲಿ ಕಳೆದ ಒಂದು ತಿಂಗಳಿಂದ ಅವರು ನೆಲೆಸಿದ್ದರು. ಸಿನಿಮಾದಲ್ಲಿನ ಆ್ಯಕ್ಷನ್ ದೃಶ್ಯಗಳನ್ನು ಅವರೇ ನಿರ್ದೇಶಿಸಿದ್ದಾರೆ. ಈಗ ಈ ಶೆಡ್ಯೂಲ್ ಮುಗಿದಿದೆ. ಹೀಗಿರುವಾಗಲೇ ಯಶ್ ಅವರು ಮುಂಬೈನಿಂದ ಲಂಡನ್‌ಗೆ ತೆರಳಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ‘ಟಾಕ್ಸಿಕ್’ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಏಕಕಾಲಕ್ಕೆ ಶೂಟ್ ಆಗುತ್ತಿದೆ. ಉಳಿದ ಭಾಷೆಗಳಿಗೆ ಸಿನಿಮಾ ಡಬ್ ಆಗುತ್ತಿದೆ. ಈಗ ಯಶ್ ಲಂಡನ್‌ಗೆ ತೆರಳಿ ಅಲ್ಲಿರೋ ನಿರ್ಮಾಣ ಸಂಸ್ಥೆಗಳ ಜೊತೆ ಸಿನಿಮಾ ಹಂಚಿಕೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಚಿತ್ರವನ್ನು ವಿಶ್ವ ಮಟ್ಟದಲ್ಲಿ ರಿಲೀಸ್ ಮಾಡಲು ಈ ಮಾತುಕತೆ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ.
0 Comments