ವಿದೇಶದಲ್ಲಿ ಸಿ.ಪಿ.ಯೋಗೇಶ್ವರ್ ಭೇಟಿಯಾದ ರಮೇಶ್‌ ಜಾರಕಿಹೊಳಿ: ಕುತೂಹಲ!



ವಿದೇಶದಲ್ಲಿ ಸಿ.ಪಿ.ಯೋಗೇಶ್ವರ್ ಭೇಟಿಯಾದ ರಮೇಶ್‌ ಜಾರಕಿಹೊಳಿ: ಕುತೂಹಲ!

 ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಸಿ.ಪಿ.ಯೋಗೇಶ್ವ‌ರ್ ಮತ್ತು ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಜರ್ಮನ್ ನಲ್ಲಿ ಭೇಟಿಯಾಗಿರುವುದು ರಾಜಕೀಯವಲಯದಲ್ಲಿ ಕುತೂಹಲ ಮೂಡಿಸಿದೆ.

ಪುತ್ರನನ್ನು ನೋಡಲು ಜರ್ಮನ್ ಗೆ ತೆರಳಿರುವ ಸಿ.ಪಿ ಯೋಗೇಶ್ವ‌ರ್ ದಂಪತಿ ರಮೇಶ್ ಜಾರಕಿಹೊಳಿ ಮ್ಯೂನಿಚ್ ನಲ್ಲಿ ಭೇಟಿಯಾಗಿದ್ದಾರೆ. ಶೀಲ್ಲಾ ಯೋಗೇಶ್ವ‌ರ್, ಯೋಗೇಶ್ವ‌ರ್ ಮತ್ತು ರಮೇಶ್‌ ಜಾರಕಿಹೋಳಿ ಇರುವ ಪೋಟೊ ಲಭ್ಯವಾಗಿದೆ. ಭೇಟಿ ರಾಜಕೀಯ ಚರ್ಚೆಗ್ಗೆ ಕಾರೆಣವಾಗಿದೆಯಾದರೂ ಇಬ್ಬರ ನಡುವೆ ತೀರಾ ಆತ್ಮೀಯತೆ ಇದ್ದು, ಹೀಗಾಗಿ ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ.

2019 ರಲಿ ರಮೇಶ್ ಜಾರಕಿಹೊಳಿ ಅವರು ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿ ಸರಕಾರ ರಚಿಸುವಲ್ಲಿ ಯೋಗೇಶ್ವ‌ರ್ ಅವರು ಪ್ರಮುಖ ಪಾತ್ರೆ ವಹಿಸಿದ್ದರು.

Post a Comment

0 Comments