ಕಾಲ್ತುಳಿತದಲ್ಲಿ ಮೃತ ಪಟ್ಟವರ ಕುಟುಂಬಕ್ಕೆ 20 ಲಕ್ಷ! ಕರೂರು ದುರಂತಕ್ಕೆ ವಿಜಯ್ ಪರಿಹಾರ ಘೋಷಣೆ



ಕರೂರು, ತಮಿಳುನಾಡು: ನಟ ಕಮ್ ರಾಜಕಾರಣಿ ವಿಜಯ್ ದಳಪತಿ (Vijay Thalapathy) ರ್ಯಾಲಿಯಲ್ಲಿ (rally) ಭೀಕರ ದುರಂತ ಸಂಭವಿಸಿದೆ. ತಮಿಳುನಾಡಿನ (Tamil Nadu) ಕರೂರಿನಲ್ಲಿ (Karur) ಟಿವಿಕೆ ಪಕ್ಷದ (TVK party) ಬೃಹತ್ ರ್ಯಾಲಿಯಲ್ಲಿ ಭೀಕರ ಕಾಲ್ತುಳಿತ (stampede) ಸಂಭವಿಸಿದೆ. ಈ ವೇಳೆ 36 ಮಂದಿ ಸಾವನ್ನಪ್ಪಿದ್ರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡು, ಆಸ್ಪತ್ರೆ ಸೇರಿದ್ದಾರೆ. ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗೋ ಸಾಧ್ಯತೆ ಇದೆ. ಇನ್ನು ಕಾಲ್ತುಳಿತಕ್ಕೆ ವಿಜಯ್‌ ಭಾಷಣದ (Vijay Speech) ವೇಳೆ ನಡೆದ ಒಂದು ಎಡವಟ್ಟೇ ಕಾರಣ ಅಂತ ಹೇಳಲಾಗ್ತಿದೆ.

Post a Comment

0 Comments