ಚಿಕ್ಕೋಡಿ... ಗೋಕಾಕ... ಬೈಲಹೊಂಗಲ ನಲ್ಲಿ ಜಿಲ್ಲೆ ಕಿಚ್ಚು.
ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನ ವೇಳೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಸದ್ದು ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಬೆಳಗಾವಿ ವಿಭಜನೆ ಹೋರಾಟ ತಲೆ ಬಿಸಿ ಆಗಲಿದೆ.
ಯಸ್...ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು ಮತ್ತೆ ಹೋರಾಟಗಳು ಆರಂಭವಾಗಿವೆ. ಚಿಕ್ಕೋಡಿ ಜಿಲ್ಲೆ ಗೆ ಒತ್ತಾಯಿಸಿ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟಗಾರರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಈ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಆರಂಭ ಮಾಡ್ತಿವಿ ಅಂತಾ ಚಿಕ್ಕೋಡಿಯ ಚರಮೂರ್ತಿಮಠದ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾರೆ. ಚಿಕ್ಕೋಡಿ ಜಿಲ್ಲೆ ಗೆ ಶಾಸಕರಾದ ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ ಮತ್ತು ಮಾಜಿ ಸಂಸದ ಅಣ್ಣಸಾಹೇಬ್ ಜೋಲ್ಲೆ ಸಹ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಚಿಕ್ಕೋಡಿ ಜಿಲ್ಲೆ ಕೂಗು ಆರಂಭವಾಗ್ತಿದ್ದಂತೆ ಗೋಕಾಕ ಜಿಲ್ಲೆಯ ಹೋರಾಟ ಕೂಡಾ ಆರಂಭವಾಗಿದೆ. ಮೊನ್ನೆಯಷ್ಟೇ ಗೋಕಾಕ ನಗರದವನ್ನ ಬಂದ್ ಮಾಡಿ ಗೋಕಾಕ ಜಿಲ್ಲೆ ಗೆ ಹೋರಾಟಗಾರರು ಒತ್ತಾಯಿಸಿದ್ದಾರೆ. ಗೋಕಾಕ ನಗರದ ಶೂನ್ಯ ಸಂಪಾದನಾ ಮಠದ ಸ್ವಾಮೀಜಿ ನೇತೃತ್ವದಲ್ಲಿ ಗೋಕಾಕ ಜಿಲ್ಲೆ ಗೆ ಒತ್ತಾಯಿಸಿ ಹೋರಾಟ ಆರಂಭವಾಗಿದೆ. ಈ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನ ಗೋಕಾಕ ಜಿಲ್ಲೆ ಹೋರಾಟ ಸಮಿತಿ ನಿಯೋಗ ಭೇಟಿ ಮಾಡಲು ನಿರ್ಧಾರ ಮಾಡಿದ್ದಾರೆ. ಮೂಲಗಳ ಪ್ರಕಾರ ಮಾಜಿ ಸಚಿವ , ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಜಿಲ್ಲೆ ಗೆ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. ಇದೇ ಕಾರಣಕ್ಕೆ ಗೋಕಾಕ ಜಿಲ್ಲೆ ಆಗಬೇಕೆಂದು ಮಾಜಿ ಸಚಿವ ಶಾಸಕ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇನ್ನೂ ಚಿಕ್ಕೋಡಿ, ಗೋಕಾಕ ಹೋರಾಟ ಆರಂಭವಾಗ್ತಿದ್ದಂತೆ ಬೈಲಹೊಂಗಲ ಜಿಲ್ಲೆ ಹೋರಾಟ ಮುನ್ನಲೇಗೆ ಬಂದಿದೆ. ಗೋಕಾಕ ಆಯ್ತು ಈಗ ಬೈಲಹೊಂಗಲ ಜಿಲ್ಲೆ ಗೆ ಒತ್ತಾಯಿಸಿ ಬೈಲಹೊಂಗಲ ಬಂದ್ ಮಾಡಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಮೂರು ಸಾವಿರದ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಆರಂಭವಾಗಿದೆ. ಬೈಲಹೊಂಗಲ ಜಿಲ್ಲೆ ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ್ ಮತ್ತು ಮಾಜಿ ಶಾಸಕ ಜಗದೀಶ್ ಮೆಟಗುಡ್ಡ ಒತ್ತಾಯಿಸಿದ್ದಾರೆ.
ಇನ್ನೂ ಬೆಳಗಾವಿ ಜಿಲ್ಲೆ ವಿಭಜನೆ ಗೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಹ ಆಸಕ್ತಿ ತೋರಿಸಿದ್ದಾರೆ. ಇಬ್ಬರೂ ಸಚಿವರು ಸಹ ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ರಚನೆಗೆ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ಹೇಳುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೇಲ್ಲ. ಆ ಸರ್ಕಾರದಲ್ಲಿ ಇರೋ ಮಂತ್ರಿಗಳು ಶಾಸಕರು ಬೆಳಗಾವಿ ಜಿಲ್ಲೆ ವಿಭಜನೆ ಮಾತುಗಳನ್ನ ಆಡ್ತಾರೆ. ಆದ್ರೆ ಈವರೆಗೂ ಬೆಳಗಾವಿ ಜಿಲ್ಲೆ ವಿಭಜನೆ ಕನಸು ಸಾಕಾರಗೊಂಡಿಲ್ಲ. ಈ ಬಾರಿಯ ಅಧಿವೇಶನದಲ್ಲಿ ಆದ್ರು ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಸಾಕಾರಗೊಳ್ಳುತ್ತಾ ಎನ್ನುವ ನಿರೀಕ್ಷೆಯಲ್ಲಿ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ತಾಲೂಕಿನ ಜನತೆ ಇದ್ದಾರೆ.
0 Comments